

19th August 2025

ಯಾದಗಿರಿ: ಸತತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರೈತರು ಬೆಳೆದ ಬೆಳೆಗಳು ನೀರಲ್ಲಿ ನಿಂದು ಅಪಾರ ಹಾನಿಯಾಗಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ತ್ವರಿತವಾಗಿ ಜಂಟಿ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಖುದ್ದಾಗಿ ಕೊಯಿಲೂರು ಭಾಗದಲ್ಲಿ ರೈತರ ಹೊಲಗಳಿಗೆ ಭೇಟಿ ಕೊಟ್ಟಾಗ ಬೆಳೆಯೆಲ್ಲ ಮಳೆಯ ನೀರ ಮಡುವಿನಲ್ಲಿ ನಿಂತಿರುವುದು ಕಮಡುಬಂತು.
ಕಳೆದ 4 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಹೆಸರು, ಹತ್ತಿ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ನೀರಲ್ಲಿ ನಿಂತಿವೆ.
ಸಾಲ ಸೋಲ ಮಾಡಿ ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿ ಬೆಳೆ ಬೆಳೆದ ರೈತರಿಗೆ ಪ್ರಕೃತಿಯ ಮುನಿಸಿನಿಂದಾಗಿ ಭೀಕರ ಹಸಿ ಬರದ ಬರೆ ಬಿದ್ದಂತಾಗಿದೆ.
ಬೆಳೆ ಕೈಗೆ ಬಂದಿದ್ದರೆ ಲಕ್ಷಾಂತರ ರೂ. ಕೈಸೇರಿ ರೈತರಿಗೆ ಆಸರೆಯಾಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮಳೆರಾಯನ ಮುನಿಸಿನಿಂದಾಗಿ ರೈತರಿಗೆ ಒಂದೋ ಗುಳೆ ಹೋಗಬೇಕು ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತು ಯುದ್ಧೋಪಾದಿಯಲ್ಲಿ ಅಣಿಯಾಗಿ ಕಂದಾಯ ಹಾಗು ಕೃಷಿ ಇಲಾಖೆಗಳ ಜಂಟಿ ಸಮಿಕ್ಷೆಯನ್ನು ಕೈಗೊಂಡು ನೊಂದ ರೈತರಿಗೆ ತ್ವರಿತವಾಗಿ ಎಕರೆಗೆ 50 ಸಾವಿರದಂತೆ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನ ನೆರವಿಗೆ ತಕ್ಷಣ ಬರಬೇಕು ಎಂದು ಕನ್ನಡಕ್ಕಾಗಿ ಕೊಡುಗೆ ಕೊಟ್ಟವರಿಗೆ ಅವಮಾನ ಆದರೂ ಸುಮ್ಮನಿರುವುದು ಕನ್ನಡದವರ ಜಾಯಮಾನವಲ್ಲ ಇದಕ್ಕೆ ಸರಿಯಾದ ಪ್ರತಿಕಾರ ಕೈಗೊಂಡು ಹಿರಿಯ ನಟನ ಕೊಡುಗೆಗೆ ಪ್ರತಿಯಾಗಿ ಸಮ್ಮಾನ ನೀಡುವ ಕೆಲಸ ಮಾಡಬೇಕು ಸರ್ಕಾರ ಇಂತಹ ದಿವ್ಯ ನಿರ್ಲಕ್ಷö್ಯ ತೋರುತ್ತಿರುವುದು ತರವಲ್ಲ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಪ್ರಕಾಶ ಪಾಟೀಲ್ ಜೈಗ್ರಾಮ್, ಯಮುನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ್, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರು, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರು, ಕಾಶಿನಾಥ ನಾನೇಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025